ಅದು ನಗರದ ಪ್ರತಿಷ್ಠಿತ ಆಸ್ಪತ್ರೆ. ರಾಜ್ಯದ ವಿವಿಧ ಭಾಗಗಳ ರೋಗಿಗಳ ಕೇಂದ್ರ. ಯಾರೇ ಕೇಳಿ ಈ ಆಸ್ಪತ್ರೆ ಬಗ್ಗೆ ಗೊತ್ತು..ಜನತೆಗೆ ಒಳ್ಳೆ ಅಭಿಪ್ರಾಯನೂ ಇದೆ. ಅದರ ನಿರ್ದೇಶಕರಂತೂ ಪದೇ ಪದೇ ಈ ಆಸ್ಪತ್ರೆ ಬಡವರಿಗೆ ಕಡಿಮೆ ಖರ್ಚಿನಲ್ಲಿ ಚಿಕಿತ್ಸೆ ನೀಡುತ್ತೇವೆ, ಅದು ನೀಡುತ್ತೇವೆ ಇದು ನೀಡುತ್ತವೆ ಅಂತ ಪತ್ರಿಕಾಗೋಷ್ಠಿಯಲ್ಲಿ ಪುಂಖಾನುಪುಂಖವಾಗಿ ಬೊಬ್ಬಿಟ್ಟದ್ದೇ ಬಂತು. ನಾನು ಎರಡು ಸಲ ಪತ್ರಿಕಾಗೋಷ್ಠಿಗೆ ಹೋಗಿದ್ದೆ. ಆಸ್ಪತ್ರೆಯ ಹೆಸರು ಕೇಳಿದ್ರೆ ಮಹಾನ್ ದಾನಿಗಳು ಹಣ ಸುರೀತಾರೆ,ಹೊಗಳುತ್ತಾರೆ. ಒಟ್ಟಿನಲ್ಲಿ ಆ ಆಸ್ಪತ್ರೆಯ ಬಗ್ಗೆ ಒಳ್ಳೆ ಹೆಸರಿದೆ..
ಆದ್ರೆ ಮೊನ್ನೆ ಮೊನ್ನೆ ನನ್ನ ಫ್ರೆಂಡು ಒಬ್ಬರು ತಮ್ಮ ಅತ್ತೆಯ ಚಿಕಿತ್ಸೆಗೆಂದು ಮೈಸೂರಿಂದ ಬಂದಿದ್ದರು. ನಾನು ಸಹಜವೆಂಬಂತೆ ಕೇಳಿದ್ದೆ; ಹೇಗೆ ಬಡವ್ರು ಹೋಗ್ಬಹುದಾ? ಖರ್ಚು ಹೆಚ್ಚಾ?.ಅದ್ಕೆ ಅವ್ರು ಹೇಳಿದ್ದ ಉತ್ತರ ಹೇಗಿತ್ತು ಗೊತ್ತಾ? "ನಾವು (ಜೆಡಿಎಸ್ ನ ಪ್ರಮುಖ ಮುಖಂಡರ ಹೆಸರು ಹೇಳಿ) ಕಡೆಯಿಂದ ಬಂದವರು. ಹೌದಾ? ಅದ್ಕೂ influence ಬೇಕಾ? ಅಂದಾಗ "ಹೂಂ ಮತ್ತೆ, ಅದಿಲ್ಲದೆ ಯಾವುದೂ ಆಗಲ್ಲಮ್ಮ." ಅಂದ್ರು. ಅವರು ಹೇಳಿದ್ದನ್ನು ಕೇಳಿ ನಾನು ಆಸ್ಪತ್ರೆಯ ಒಳಹೊಕ್ಕೆ. ಐದಾರು ರೋಗಿಗಳನ್ನು ಮಾತಾಡಿಸಿದ್ದೆ. ಅವರೇನೂ ಬಡವರಲ್ಲ, ದುಡ್ಡನ್ನೇ ಹಾಸಿಗೆ ಮಾಡ್ಕೊಂಡವರು. ಆದ್ರೂ ಅವರಿಗೆ influence! ಬಡವರಿಗೆ ಅಲ್ಲಿನ ಡಾಕ್ಟರ್ ಗಳು ಹೇಳಿದ್ದೇ ಮದ್ದು..ಕೊಟ್ಟಿದ್ದೇ injection, ಹೇಳಿದಷ್ಟು ದುಡ್ಡು ಎನೀಸಿಕೊಡಬೇಕು..ಹಾಗಾಗಿ ಬಡವರು ಬಂದ್ರು ಸಾಲ ಮಾಡಿ, ಏನೇನೋ ಮಾಡಿ ಬರಬೇಕು. ಹಣವಿಲ್ಲಾಂದ್ರೆ ಅಲ್ಲಿಗೆ ಬರುವಂತಿಲ್ಲ. ಸಾಯುತ್ತಿರುವ ಜೀವವನ್ನು ಉಳಿಸಿಕೊಳ್ಲಲೂ ಸಾಧ್ಯವಿಲ್ಲ.
ಇದ್ಯಾಕಪ್ಪಾ ಬ್ಲಾಗಲ್ಲಿ ಬರೆದ್ಳು? ಇದು ಎಲ್ಲಾ ಕಡೆ ಆಗುತ್ತೆ ಅನ್ನಬಹುದು..ಅದರೆ ನನಗೇಕೋ ಆ ಆಸ್ಪತ್ರೆ ಮೇಲ್ನೋಟಕ್ಕೆ ಕಾಣುವ ಹಾಗೆ ಇಲ್ಲ ಅನಿಸುತ್ತೆ..ಹೌದು! ಈಗಿನ ಕಾಲದಲ್ಲಿ ಮನುಷ್ಯನ ಬದುಕೇ influence ಮೇಲೆ ನಿಂತಿದೆ. ಅನಿಸಲ್ವಾ?
Friday, June 20, 2008
ಖಂಡಿತಾ ಬರ್ತೀರಲ್ವಾ?
ಇದೊಂದು ಸಿನಿಮಾ. ಹೆಸರು 'ನಂಪ್ರೀತಿ'! ನಮ್ದೋ..ನಿಮ್ದೋ ಯಾರ ಪ್ರೀತಿನೋ ಗೊತ್ತಿಲ್ಲ. ಹೆಸರೇ 'ನಂಪ್ರೀತಿ'. ಸಬ್ ಟೈಟಲ್ 'ನಿರೀಕ್ಷೆ ಕೂಡದು'! ಹೀಗಿರುವಾಗ ಯಾವುದೇ ನಿರೀಕ್ಷೆಯಿಟ್ಟುಕೊಂಡು ಹೋಗಬೇಡಿ. ಕೇವಲ 20 ನಿಮಿಷದಲ್ಲೇ ಸಿನಿಮಾ ಮುಗಿದುಹೋಗುತ್ತೆ. ಕಥೆಯ ಕ್ಲೂ ಕೊಡಕ್ಕೂ ನನಗಾಗಲ್ಲ, ಏಕಂದ್ರೆ ನನಗೂ ಗೊತ್ತಿಲ್ಲ..ಯಾರೂ ಹೇಳಿಲ್ಲ. ಪ್ರದರ್ಶನಕ್ಕೆ ಮೊದ್ಲು ಕಥೆ ಹೇಳೋದು ಮೂರ್ಖತನ ಬಿಡಿ. ಇದೇ ಭಾನುವಾರ(22 ತಾರೀಕು) ಸಂಜೆ 4 ಗಂಟೆಗೆ ಬನಶಂಕರಿಯಲ್ಲಿರುವ 'ಸುಚಿತ್ರಾ ಫಿಲಂ ಸೊಸೈಟಿ'ಯಲ್ಲಿ ಶೋ ಇದೆ. ನೀವು ಬರಬಹುದು, ಮನೆಯವರೆಲ್ಲರನ್ನೂ ಕರೆಯಬಹುದು. ಕೇವಲ 20 ನಿಮಿಷ, ಟಿಕೇಟ್ ಗೆ ದುಡ್ಡು ಕೊಡಬೇಕಿಲ್ಲ..2.30 ಗಂಟೆ ಕತ್ತಲಲ್ಲಿ ಕುಳಿತು ಅಯ್ಯೋ ಟೈಮ್ ವೇಸ್ಟ್ ಅಂತ ಬೊಬ್ಬಿಡುವ ಅಗತ್ಯವಿಲ್ಲ. ಕೇವಲ 20 ನಿಮಿಷ..ಜೀವನದಲ್ಲಿ ಇಂಥ ಎಷ್ಟೋ 20 ನಿಮಿಷವನ್ನು ಕಳೆದುಕೊಂಡಿದ್ದೇವೆ..ವ್ಯಯಿಸಿದ್ದೇವೆ. ಹೀಗಿರುವಾಗ 'ನಂಪ್ರೀತಿ' ಗೋಸ್ಕರ 20 ನಿಮಿಷ ಮೀಸಲಿಟ್ಟರೆ ಅದು ವ್ಯರ್ಥವೆನಿಸದು.
ಹೇಳಕ್ಕೆ ಮರೆತೆ..ಇದರ ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ದೇಶನ ಕವೀಶ್ ಶೃಂಗೇರಿ, ನಿರ್ಮಾಪಕ ಸಾಕ್ಷಿರಾಜ್, ನಾಯಕ ಕುಶಾಲ್ ರಾಘವೇಂದ್ರ, ನಾಯಕಿ ರಂಗಭೂಮಿ ಕಲಾವಿದೆ ನಿರ್ಮಾಲಾ. ಛಾಯಾಗ್ರಹಣ ಸುನೀಲ್ ಶಿವಮೊಗ್ಗ, ಸಂಗೀತ ಆನಂದ್ ಎನ್. ಕುಮಾರ್. ಇಲ್ಲಿ ಬರುವ ಎಲ್ಲಾ ಮುಖಗಳೂ ಹೊಸತು. ಈ ಪುಟ್ಟ ಸಿನಿಮಾಕ್ಕೆ ಬರೋಬ್ಬರಿ ದುಡ್ಡೇನು ಹಾಕಿಲ್ಲ. ಪ್ರಯತ್ನದ ಶ್ರಮವಿದೆ. ಭಾನುವಾರ ರಜಾ ಇದ್ದೇ ಇದೆ..ಬಿಡುವು ಮಾಡ್ಕೊಂಡು ಬನ್ನಿ. ಬರುತ್ತೀರಿ ತಾನೇ?ಈ ಬಗ್ಗೆ ಇನ್ನೂ ಮಾಹಿತಿ ಬೇಕೇ?
ಸಾಕ್ಷಿರಾಜ್:9448171069
ರಾಘವೇಂದ್ರ: 9886683008
Thursday, April 24, 2008
ಚುನಾವಣೆ ಮುಗಿದ ಮೆಲೆ ಬ್ಲಾಗ್ ಬುಟ್ಟಿಗೆ ಮರಳುತ್ತೇನೆ..!
ಸ್ನೇಹಿತರೇ,
ನೀವಂದ್ರೆ ನನಗಿಷ್ಟ..ಹೀಗಿರುವಾಗ ನಾನಂದ್ರೂ ನಿಮಗಿಷ್ಟವಾಗಿರಬಹುದು. ಕಳೆದ ನವೆಂಬರ್ನಲ್ಲಿ ಬ್ಲಾಗ್ ಬುಟ್ಟಿ ತೆರೆದ ಹುಡುಗಿ ಎಲ್ಲೋದ್ಳಪ್ಪಾ?ಅಂತ ಹುಡುಕಿದವರಿದ್ದಾರೆ. ಸ್ವತಃ ನನ್ನ ಜೊತೆ ಕೇಳಿದವರೂ ಇದ್ದಾರೆ. ಯಾಕೋ ಬ್ಲಾಗ್ ನಿಲ್ಲಿಸಿಬಿಟ್ಟೆ..ಬರೇಮ್ಮಾ,..ಅಂತ ಬೆನ್ನು ತಟ್ಟಿದವರೂ ಇದ್ದಾರೆ. ಇಷ್ಟೇಲ್ಲಾ ಇದ್ರೂ ಕೆಲದಿನಗಳಿಂದ ನಾನು ಬರೆಯುತ್ತಿಲ್ಲ. ಹಾಗಂತ ಬ್ಲಾಗ್ ಲೋಕದಿಂದ ಹೊರಟು ಹೋಗುತ್ತೇನೆಂದಲ್ಲ.
ನಿಮಗೆ ತಿಳಿದೇ ಇದೆ. ಚುನಾವಣೆ ಬಂತು. ಪತ್ರಿಕಾಗೋಷ್ಠಿ ಅಥವಾ ಇನ್ನಿತರ ರಾಜಕೀಯ, ಚುನಾವಣಾ ಕಾರ್ಯಕ್ರಮಗಳು ಭರದಿಂದ ಸಾಗುತ್ತವೆ. ಆಫೀಸಿನಲ್ಲಿ ಕೆಲಸ ಜಾಸ್ತಿಯಾಗುತ್ತಿದೆ. ಎಷ್ಟೋ ಬಾರಿ ಬಿಡುವು ಮಾಡಿಕೊಂಡು ಬರೆಯೋಣ ಅಂದ್ರ ಬರೆಯಲಾಗುತ್ತಿಲ್ಲ. ಚುನಾವಣೆ ಮುಗಿಯುವುದು ಮೇ ತಿಂಗಳ ಕೊನೆಯ ವಾರದಲ್ಲಿ. ಆಮೇಲೆ ಬ್ಲಾಗ್ ಬರೇತಿಯಾ ಅಂತ ಕೇಳಬಹುದು. ಪ್ರತಿಯೊಬ್ಬರಿಗೂ ಮನೆ ಅಂತ ಒಂದು ಇದ್ದೇ ಇದೆಯಲ್ಲಾ..ಮನೆಗೆ ಹೋಗಬೇಕು. ಜೂನ್ ನಲ್ಲಿ ಮನೆಗೆ ಅಮ್ಮನ ನೋಡಿ, ಅವರ ಜೊತೆಗೊಂದಿಷ್ಟು ಖುಷಿ ಖುಷಿ ದಿನಗಳನ್ನು ಕಳೆದು ಬರಬೇಕು. ಆಮೇಲೆ ಬ್ಲಾಗ್.,ಜುಲೈ ಮೊದಲಿಂದ ಮತ್ತೆ ಬ್ಲಾಗ್ ಕಡೆ ಬರುತ್ತೇನೆ..ಅಲ್ಲಿಯವರೆಗೆ ಬ್ಲಾಗ್ ಬರೆಯುವುದು ಕಷ್ಟಸಾಧ್ಯ. ನಿಮ್ಮ ಪ್ರೀತಿ, ಪ್ರೋತ್ಸಾಹ, ಹಾರೈಕೆ ನನ್ನೊಂದಿಗಿರಲಿ. ನನ್ ಮರೆಯೊಲ್ಲ ಅಲ್ವಾ?

Thursday, March 27, 2008
ಹಾಕಿ ಸೋತಾಗ ಯಾರಿಗಾದ್ರೂ ಹಾರ್ಟ್ ಅಟ್ಯಾಕ್ ಆಯ್ತಾ?
ಮೊನ್ನೆ ಮೊನ್ನೆ ನಮ್ ದೇಶದ ರಾಷ್ಟ್ರೀಯ ಕ್ರೀಡೆ ಹಾಕಿ ಬ್ರಿಟನ್ ತಂಡದೆದುರು ಸೋತು ಸುಣ್ಣವಾಗಿದೆ! ಆ ಸೋತು ಮಾಜಿ ಆಟಗಾರರು, ನಮ್ ದೇಶದ ಚಾನೆಲ್ಲುಗಳು, ಪತ್ರಿಕೆಗಳು ಒಂದಿಷ್ಟು ಬೈದು, ರೇಗಾಡಿ, ಕಣ್ಣೀರು ಹಾಕಿದ ಮೇಲೆ ನಾನು ನನ್ನ ಬ್ಲಾಗಲ್ಲಿ ಬರೆಯುತ್ತಿದ್ದೇನೆ. ಹೌದು! ಎಲ್ಲಾ ಪತ್ರಿಕೆಗಳು ಬರೆದಿದ್ದನ್ನು, ಚಾನೆಲ್ಲುಗಳಲ್ಲಿ ಬಂದಿದ್ದನ್ನು, ಮಾಜಿ ಆಟಗಾರರು ಅತ್ತು ಗೋಳಾಡಿದ್ದನ್ನು, ಸಿಟ್ಟಲ್ಲಿ ಕೋಚ್ ಗೆ ಉಪ್ಪು ಖಾರ ಬೆರೆಸಿ ಬೈದಿದನ್ನು ನೋಡಿದ ಮೇಲೆ ನನ್ ಬ್ಲಾಗ್ ನಲ್ಲಿ ಬರೆಯುತ್ತಿದ್ದೇನೆಂದರೆ ಇದು ನಕಲು ಅಂತ ಭಾವಿಸಿದರೆ ಅದು ದೊಡ್ಡ ಅಪರಾಧವಾದೀತು ಅಂತ ನನ್ ಭಾವನೆ.
ಹೌದು! ಹಾಕಿ ಸೋತಿತ್ತು. ತಂಡದಲ್ಲಿಯೋ ಅಥವಾ ಕೋಚ್ ನಲ್ಲೋ ಯಾರಲ್ಲೋ ಏನೋ ಸ್ವಲ್ಪ ದೌರ್ಬಲ್ಯ. ಇದು ಸಹಜ. ಕೂಡ. ಎಲ್ಲಾ ಕಾಲದಲ್ಲಿಯೂ ನಾವು ಗೆಲ್ಲೇಬೇಕಂತಿಲ್ಲ, ಸೋಲೇ ಗೆಲುವಿನ ಸೋಪಾನ. ನಮ್ಮ ರಾಷ್ಟ್ರೀಯ ಕ್ರೀಡೆ ಒಲಿಂಪಿಕ್ ನಲ್ಲಿ ಭಾಗವಹಿಸಲು ಅರ್ಹತೆ ಕಳೆದುಕೊಂಡಿತ್ತು, ಅದು ಭಾರತಕ್ಕೆ ಅವಮಾನ ..ಅಂತ ಕೆಲವರು ಹೇಳಿದ್ರು. ಒಪ್ಪಿಕೊಳ್ಳೋಣ. ಆದ್ರೆ ಯಾರು ಈ ಬಗ್ಗೆ ಭಾರೀ ಪ್ರತಿಭಟನೆ ಮಾಡಿದ್ರು? ಸೋತ ಆಟಗಾರನ ಮನೆಯೆದುರು ಯಾರಾದ್ರೂ ಅವನ ಪ್ರತಿಕೃತಿ ಸುಟ್ರಾ? ಸೋತ ಆಟಗಾರನ ಮನೆಗೆ ಬಿಗಿ ಭದ್ರತಾ ವ್ಯವಸ್ಥೆ ಮಾಡಿದ್ರಾ? ಸೋತ್ರೂ ಮುಂದಿನ ಸಲ ಗೆದ್ದು ಬನ್ನಿ ಅಂತ ಯಾರಾದ್ರೂ ಮುಂದೆ ಬಂದು ಹಾರೈಸಿದ್ರಾ? ನಾವ್ಯಾರಾದ್ರೂ ಈ ಬಗ್ಗೆ ಚಿಂತೆ ಮಾಡಿದ್ದೀವಾ? ಹಾಕಿ ಸೋತಿತು ಅಂತ ಯಾರಿಗಾದ್ರೂ ಹಾರ್ಟ್ ಅಟ್ಯಾಕ್ ಆಯಿತಾ? ನನ್ನ ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ "ಇಲ್ಲ"!
ಕ್ರಿಕೆಟ್ ಸೋಲ್ತಾ ಇದ್ರೆ ಹಾರ್ಟ್ ಅಟ್ಯಾಕ್ ಆಗಿ ಸಾಯುವ ತನಕವೂ ನಮ್ಮ ಅಭಿಮಾನ ಪ್ರೀತಿ ಬಂದಿರುತ್ತೆ. ಶರದ್ ಪವಾರ್ ಕೃಷಿಯನ್ನು ಬದಿಗಿಟ್ಟು, ಬ್ಯಾಟ್ ಹಿಡಿದು ಬೊಂಬಾಟ್ ಬಹುಮಾನ ಘೋಷಿಸಿಬಿಡ್ತಾರೆ. ಇದೆಲ್ಲ ಕ್ರಿಕೆಟ್ ನಲ್ಲಿ ಮಾತ್ರ ಹೀಗಾಗಲೂ ಸಾಧ್ಯ. ನಮ್ ಹಾಕೀನ ಯಾರು ಕೇಳ್ತಾರೆ? ಸೋತ ಆಟಗಾರರ ಬೆನ್ನು ಯಾರು ತಟ್ತಾರೆ.? ಅಂತೂ ಈ ಸೋಲಿನಿಂದ ಕೋಚ್ ರಾಜೀನಾಮೆ ನೀಡಬೇಕಾಯಿತು. ಕ್ರಿಕೆಟ್ ಅಂದ್ರೆ ಜನ ಹುಚ್ಚೆದ್ದು ಕುಣಿತಾರೆ, ಹಾಗೆಂದು ಕುಣಿಬಾರ್ದು ಅನ್ನಲ್ಲ. ನಮ್ಮ ಸಮಸ್ತ ದೇಶ ಕ್ರಿಕೆಟ್ ಬಿಟ್ರೆ ಇನ್ಯಾವ ಕ್ರೀಡೆಯನ್ನೂ ಪ್ರೋತ್ಸಾಹಿಸಲ್ಲ ಅನ್ನೋದಕ್ಕೆ ನಿದರ್ಶನವಷ್ಠೇ.
ನಮ್ಮ ದೇಶದಲ್ಲಿ ಕ್ರಿಕೆಟ್ ಬಿಟ್ರೆ ಇನ್ಯಾವ ಕ್ರೀಡೆಯೂ ಶೋಭಿಸುವುದಿಲ್ಲ, ಇದಕ್ಕೆ ಕಾರಣ ಪ್ರೋತ್ಸಾಹದ ಕೊರತೆ. ಜನ, ಸರ್ಕಾರ ಇತರೆ ಕ್ರೀಡೆಗಳನ್ನು ಪ್ರೋತ್ಸಾಹಿಸಲಿ. ಹಾಕಿಗೆ ಸ್ವಲ್ಪ ಜೀವ ಬಂದಿದ್ದು 'ಚಕ್ ದೇ ಇಂಡಿಯಾ' ತೆರೆ ಮೇಲೆ ಕಂಡ ಮೇಲೆ ಅನ್ತಾರೆ. ಆದರೆ ಅದ್ರಲ್ಲಿ ಹಾಕಿಗಿಂತ ಶಾರುಖ್ ಖಾನ್ ಗೆ ಪ್ರಚಾರದ ಲಾಭ ಸಿಕ್ಕಿದೆ ಅನ್ನೋದು ಎಲ್ರೂ ಅರಿಯಬೇಕಾದ ಸತ್ಯ. 'ಚಕ್ ದೇ ಇಂಡಿಯಾ' ನಿಜವಾಗಿಯೂ ಪ್ರಸ್ತುತ ದೇಶದಲ್ಲಿ ಹಾಕಿಯ ಪರಿಸ್ಥಿತಿಯನ್ನು ವಿವರಿಸಿದೆ. ಇಂದು ಕ್ರಿಕೆಟ್ ನಂತೆಯೇ ಎಲ್ಲಾ ಕ್ರೀಡೆಗಳಿಗೂ ಪ್ರೋತ್ಸಾಹ ಸಿಕ್ಕಿದರೆ ಖಂಡಿತ ಭಾರತ ಕ್ರೀಡಾರಂಗದಲ್ಲಿ ಸಾಧನೆಯ ಶೀಖರವೇರಲು ಸಾಧ್ಯ. ಇದಕ್ಕಿಂತ ಹಾಕಿ ಅನ್ನೋದು ನಮ್ಮ ರಾಷ್ಟ್ರೀಯ ಕ್ರೀಡೆ ಅನ್ನೋದು ನೆನಪಲ್ಲಿರಲಿ.

Wednesday, March 26, 2008
ಬ್ಯುಸಿ ಬ್ಯುಸಿಯಾದ ನಿತ್ಯ ಬದುಕು
ತುಂಬಾ ದಿನಗಳಾಯ್ತು. ದಿನ ಬರೀಬೇಕು ಅಂತ ಬ್ಲಾಗ್ ಶುರುಮಾಡಿದ್ದೆ. ನನ್ನ ಭಾವನೆಗಳು, ಕನಸುಗಳು, ಮನದ ಬರೆವಣಿಗೆಯ ತುಡಿತಕ್ಕೆ ಬ್ಲಾಗ್ ವೇದಿಕೆಯಾಗಬೇಕೆಂದು ಬರೆದೆ. ಆದ್ರೆ ಈಗ ದಿನವಿರಲಿ, ವಾರ ಕಳೆದು ತಿಂಗಳೂ ಹತ್ತಿರ ಬಂದ್ರೂ ಬರೆಯಕ್ಕಾಗಲ್ಲ. ಏನೇನೋ ಕೆಲಸ, ಮನಸ್ಸು ಗೊಂದಲದ ಬೀಡು..ಸಮಯವಿಲ್ಲ ಅನಿಸುತ್ತೆ.
ಇವತ್ತು ಬೆಳಿಗೆದ್ದಾಗ ಅಮ್ಮನ ಫೋನು. ಮುದ್ದಿನ ಮಗಳು ಜಾಸ್ತಿ ನಿದ್ದೆಮಾಡಬಾರದೇನೆಂದೋ ಪೋನು ಮಾಡಿದ್ದು ಸರಿಯಾಗಿ ಆರು ಗಂಟೆ. ಆಗ ನಾನಿನ್ನೂ ಮುಂಜಾವಿನ ಅರೆನಿದ್ದೆಯಲ್ಲಿದ್ದೆ. ಅದೇನೋ ಬೆಂಗಳೂರಿನಲ್ಲಿ ಮಳೆ..ಅಂತಾರೆ ಅಕಾಲಿಕ ಮಳೆ. ಸದ್ದುಗದ್ದಲ್ಲ ವಿಲ್ಲದೆ ಒಮ್ಮಗೆ ಸುರಿಯುವ ಮುಂಗಾರು ಮಳೇ. ನಿನ್ನೆ ರಾತ್ರಿ ಆಫೀಸಿನಿಂದ ಹೋಗುವಾಗಲೂ ತಡವಾಗಿದ್ದರಿಂದ, ಟ್ರಾಫಿಕ್ ನಡುವೆ ಮನೆಗೆ ತಲುಪುವಾಗ ಇನ್ನೂ ತಡವಾಗಿತ್ತು. ಮಳೆಯಲ್ಲಿ ನೆನೆದು, ತಲೆಯೆಲ್ಲಾ ಭಾರವಾಗಿ ಮನೆ ತಲುಪಿದ್ದೆ. ಊಟ ಮಾಡಿದ್ದೇ ತಡ, ನಿದ್ದೇಯೇ ನಿದ್ದೆ. ಹಾಗೆ ಅಮ್ಮನ ಫೋನು ಬರುವಾಗ ಬೆಚ್ಚಗೆ ನಿದ್ದೆ ಮಾಡಿದ್ದೆ. ಅಣ್ಣ ಗದರಿಸಿ, ತಕೋ ಅಮ್ಮನ ಪೋನು ಅಂದಾಗ ಅತ್ತಲಿಂದ ಅಮ್ಮ "ಎಷ್ಟು ಹೊತ್ತಿಗೆ ನಾನು ಫೋನು ಮಾಡಿದ್ರೂ ಬ್ಯುಸಿ, ಬ್ಯುಸಿ ಅಂತೀಯಾ, ಏಳೇ ಬೇಗ. ಸಮಯ ತಾನಾಗಿ ಬರಲ್ಲ, ನಾವು ಮಾಡ್ಕೋಬೇಕು. ನೋಡು ನಾನು ಎದ್ದು ಎಲ್ಲಾ ಕೆಲ್ಸ ಮುಗಿಸಿ, ಸೊಪ್ಪಿಗೆ ಹೋಗ್ತಾ ಇದ್ದೀನಿ. ಅದೇನು ಮಾಡ್ತಿಯೋ? ಅದೇಂಗೆ ಆರೋಗ್ಯನೋ" ಅಂದ್ರು. ಅಮ್ಮ ಬೈದ್ರೂ, ಅದ್ರೊಳಗೆ ಸಿಹಿ ಇದ್ದೇ ಇರುತ್ತೆ ಅಲ್ವಾ? ಅವರಿಗೆ ರೇಗದೆ ಅಣ್ಣನ ಜೊತೆ ರೇಗಾಡಿದೆ.
ನಂಗನಿಸೋದು ನಾವು ಕೆಲ್ಸ ಇಲ್ಲಾಂದ್ರು ಎಷ್ಟು ಬ್ಯುಸಿಯಾಗಿರ್ತೀವಿ ಅಂತ. ನಾನು ಬೆಳಿಗ್ಗೆ ಏಳೂವರೆಗೆ ಆಫೀಸಿಗೆ ಮನೆಯಿಂದ ಹೊರಟರೆ, ಸಂಜೆ ಮನೆಗೆ ತಲುಪುವಾಗ ಎಂಟು ಕಳೆದಿರುತ್ತೆ. ಆಮೇಲೆ ಸ್ನಾನ ಮಾಡಬೇಕು, ಆಡುಗೆ ಆಗಿಲ್ಲಾಂದ್ರೆ ಅಡುಗೆ ಆಗಬೇಕು, ಊಟ ಮಾಡಬೇಕು.. ಇಷ್ಟೆಲ್ಲ ಆಗುವಾಗ ಗಂಟೆ ಹತ್ತು ದಾಟಿರುತ್ತೆ. ಅದೇನೋ ಬೆಂಗಳೂರಂತನೋ ಸಮಯವನ್ನೇ ಹೊದ್ದು ಮಲಗಿದ್ರೂ ಇಲ್ಲಿ ಸಮಯವಿರಲ್ಲ ಅಂತಾನೇ ಅನಿಸುತ್ತೆ. ಅದೇನಪ್ಪಾ ಅದೊಂತರಾ ಯಂತ್ರವಾಗಿಬಿಡ್ತೀವಿ. ಕೆಲ್ಸ..ಕೆಲ್ಸ..ಕೆಲ್ಸ ..ನಿದ್ದೆಗೂ ಟೈಮಿಲ್ಲ. ಇದು ಬೆಂಗಳೂರು ಲೈಫ್ ಅಲ್ವಾ?
ನಮ್ಮಮ್ಮ ಅದೆಷ್ಟೋ ಚೆನ್ನಾಗಿ ಬೆಳೆಸ್ತಾರೆ..ನಮ್ ಬೆಟ್ಟದಷ್ಟು ಕನಸುಗಳನ್ನು ಕಾಣ್ತಾರೆ..ಆದ್ರೆ ಅವರು ಪ್ರೀತಿಯಿಂದ ಫೋನು ಮಾಡುವಾಗ ಅಮ್ಮ ಬ್ಯುಸಿ ಅಂದು ಪೋನು ಕಟ್ ಮಾಡಿದ್ನಲ್ಲಾ ಅಂತ ತುಂಬಾ ಸಲ ನೊಂದುಕೊಂಡೆ. ಇದು ನಾನು ಮಾತ್ರವಲ್ಲ, ಎಷ್ಟೋ ಮಕ್ಕಳು ಹಿಂಗೆ ಮಾಡ್ತಾರೆ. ಆದ್ರೆ ಅಮ್ಮಂಗೆ ಆ ಪ್ರೀತಿ ಹೆಚ್ಚಾಗುತ್ತೆ ಹೊರತು, ಕಡಿಮೆಯಾಗಲ್ಲ. ಅಮ್ಮ ಏನಾದ್ರೂ ಕೇಳಿದ್ರೆ 'ನಿಂಗದು ಅರ್ಥವಾಗಲ್ಲ, ಸುಮ್ಮಿರು' ಅಂತೀವಿ. ಆದ್ರೆ ಬದುಕಿನ ಅರ್ಥವನ್ನು ತಿಳಿಸಿಕೊಟ್ಟ, ಬದುಕನ್ನೇ ಧಾರೆಯೆರೆದ ಅಮ್ಮನಿಗೆ ನಾವು ಹೇಳಿದ್ದು, ಮಾಡಿದ್ದು ಖಂಡಿತ ಅರ್ಥವಾಗುತ್ತೆ ಅಲ್ವಾ? ನಾನು ತುಂಬಾ ಸಲ ಅಮ್ಮನ ಜೊತೆ ರೇಗಿ, ಆಮೇಲೆ ಪಶ್ಚಾತ್ತಾಪ ಪಟ್ಟಿದ್ದೀನಿ. ದಿನಸರಿದಂತೆ ಬದುಕಿನ ಪಯಣದಲ್ಲಿ ನಮಗರಿವಿಲ್ಲದಂತೆ ನಾವೆಷ್ಟು ಬ್ಯುಸಿಯಾಗಿಬಿಡ್ತೀವಿ ಅಲ್ಲಾ?

Thursday, March 20, 2008
ಎಲ್ಲವೂ ಜನ್ರ ಉದ್ಧಾರಕ್ಕಾಗಿ!
ಅದೇ ..ಎಲ್ಲವೂ ಮಾಡೋದು ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ..ಅನ್ನೋದಕ್ಕಿಂತಲೂ ಎಲ್ಲರೂ ಮಾಡೋದು ಜನ್ರ ಉದ್ದಾರಕ್ಕಾಗಿ! ಅಂದ್ರೆ ಇನ್ನೂ ಚೆನ್ನಾಗಿರುತ್ತೆ ಅಂತ ಅನಿಸುತ್ತೆ. ಈ ಪಕ್ಷಗಳು, ರಾಜಕಾರಣಿಗಳು ಎಲ್ರೂ ಮಾಡೋದು ಜನ್ರ ಉದ್ಧಾರಕ್ಕಾಗಿ! ಅದೂ ಕೇವಲ ಚುನಾವಣೆ ಬಂದಾಗ ಮಾತ್ರ. ಕಳೆದ ಶನಿವಾರ 15ನೇ ತಾರೀಕು ಬಿ.ಜೆ.ಪಿಯ ಭಾರೀ ದೊಡ್ಡ ಹೋರಾಟ ಇತ್ತು. ಯಾಕಂದ್ರೆ ರಾಜ್ಯಪಾಲರು ಸಂಧ್ಯಾ ಸುರಕ್ಷಾ ಯೋಜನೆಯನ್ನು ವಿಳಂಬ ಮಾಡಿದ್ರು ಅಂತೇಳಿ ..ಅವ್ರ ಹೋರಾಟ ಅಷ್ಟೇ.
.ಎಷ್ಟಾದ್ರೂ ಸರ್ಕಾರದ ಯೋಜನೆಗಳೆಲ್ಲ ಜನರಿಗೆ ಉಪಯೋಗವಾಗುವಂತವುಗಳು...ಅಷ್ಟೇ ಅಲ್ಲ ಮುಂದಿನ ಮೇ ತಿಂಗಳಲ್ಲಿ ಚುನಾವಣೆ ಬಂದ್ರೆ ಅದ್ಕು ಉಪಯೋಗವಾಗುತ್ತೆ ಬಿಡಿ. ನಾನು ಅಂದು ಕೆಪಿಸಿಸಿ, ಬಿಜೆಪಿ ಮತ್ತು ಜೆಡಿಎಸ್ ಕಚೇರಿಗಳಿಗೆ ಹೊರಟಿದ್ದೆ. ಮಲ್ಲೇಶ್ವರದಲ್ಲಿರುವ ಬಜೆಪಿ ಕಚೇರಿಗೆ ಹೋದಾಗ ಮಲ್ಲೇಶ್ವರದ ಮುಖ್ಯರಸ್ತೆಯಿಂದಲೇ ಬಸ್ಸುಗಳು, ಕಾರುಗಳು, ವ್ಯಾನ್ ಗಳು ನಿಂತಿವೆ. ಅವ್ರ ಕಚೇರಿಗೆ ಹೋದಾಗ ಕಾರ್ಯಕರ್ತರೆಲ್ಲ ಪುಲ್ ಬ್ಯುಸಿ. ನನ್ ಕೆಲ್ಸ ಮುಗಿಸಿಕೊಂಡು ಕೆಪಿಸಿಸಿಗೆ ಬಂದು ಅಲ್ಲಿಂದ ಕೆಪಿಸಿಸಿಗೆ ಬರಬೇಕಾದ್ರೆ 4 ಗಂಟೆ ಬೇಕಾಯಿತು. ರಾಜಭವನ ರಸ್ತೆಯಲ್ಲಂತೂ ಗಂಟೆಗಟ್ಟಲೆ ನಡೆದೆ. ಎಲ್ಲಾ ಬಿಜೆಪಿ ಹೋರಾಟದ ಬಸ್ಸುಗಳು..ಟ್ರಾಫಿಕ್ ಜಾಮ್. ನಡೆದುಕೊಂಡೇ ವಿಧಾನಸೌಧ ಹತ್ರ ಬಂದೆ ಅಲ್ಲೂ ಜಾಮ್..ಕಬ್ಬನ್ ಪಾರ್ಕ್ ನಲ್ಲಿರುವ ತಂಪು ಮರಗಳ ನಡುವೆ ವಾಹನಗಳು, ಜನಜಂಗುಳಿ..ಅಲ್ಲೇ ತಿಂದು ಉಗಿಯುವ ಜನರು..ಅಬ್ಬಬ್ಬಾ ಇನ್ನೇನೋ ಎದ್ದುನಡೆಯಲಾಗದ ಅಜ್ಜ-ಅಜ್ಜಿಯರು, ಯಾಕೋ ಕೈಗೆ ಬ್ಯಾಂಡೆಜ್ ಹಾಕಿದವರು...ಮಕ್ಕಳು ಎಲ್ರೂ ಈ ಹೋರಾಟಗಳ ಪಾಲುದಾರರು. ಇಷ್ಟು ಬಂದ್ರೆ ಅವರಿಗೆ ಫ್ರೀ ಊಟ, ಬೇಕಾಂದ್ರೆ ಕಿರಿಕ್ಕು..ಆಮೇಲೆ 100ರೂಪಾಯಿಯಂತೆ! ಹಾಗಂತ ಅಲ್ಲೊಬ್ರು ಅಜ್ಜಿಯನ್ನು ಕೇಳಿದಾಗ ಹೇಳಿದ್ರು. ರಾಜ್ಯದ ಎಲ್ಲಾ ಮೂಲೆಗಳಿಂದಲೂ ಜನ ಬಂದಿದ್ರು. 100ಕ್ಕೂ ಹೆಚ್ಚು ಬಸ್ಸುಗಳು ಕಬ್ಬನ್ ಪಾರ್ಕ್ ತುಂಬಾ ನಿಂತಿದ್ದವು. ಅಲ್ಲೇಲ್ಲ ಗಲೀಜು, ಕಾಲಿಡಕ್ಕೂ ಜಾಗವಿಲ್ಲ. ಆ ಟ್ರಾಪಿಕ್ ನಲ್ಲಿ ಸಿಕ್ಕಹಾಕೊಂಡು ಕೇವಲ 2 ಗಂಟೆಯೊಳಗೆ ಮುಗಿಸಬೇಕಾದ ಕೆಲಸವನ್ನು ಮುಗಿಸಿ ನನ್ ಕಚೇರಿಗೆ ಬಂದಿದ್ದು ಸಂಜೆ ಸೂರ್ಯ ಮುಳುಗಿದ ನಂತರ ಅಂದ್ರೆ ಏಲು ಗಂಟೆಗೆ. ನಡೆದು ನಡೆದು ಕಾಲೆಲ್ಲ ಬಾತುಕೊಂಡಿತ್ತು..ಮನೆಗೆ ಬಂದು ಕಾಲಿಗೆ ಎಣ್ಣೆ ಸವರಿ ಬಿಸಿ ನೀರು ಹಾಕಿದ್ರೂ ಒಂದು ವಾರ ನೋವು ಹೋಗಿಲ್ಲ.
ನಮ್ ರಾಜಕಾರಣಿಗಳ ಹೋರಾಟ, ಜನಪರ ಕಾಳಜಿ ಎಲ್ಲಾ ಶುರುವಾಗೋದೇ ಚುನಾವಣೆ ಬಂದಾಗ. ಇನ್ನೆನೋ ಮೇ ನಲ್ಲಿ ಚುನಾವಣೆ ಗ್ಯಾರಂಟಿ ಅಂತ ಅನಿಸುತ್ತೆ. ಹೋರಾಟಗಳು, ರ್ಯಾಲಿಗಳು, ಸಮಾವೇಶಗಳು ಎಲ್ಲವೂ ಶುರುವಾಗಿವೆ. ರೈತ, ಜನಪರ ಸರ್ಕಾರದ ಕನಸಲ್ಲಿರುವ ಜನರಿಗೆ ಬೆಣ್ಣೆ ಸವರುವ ಕೆಲಸ ಆರಂಭವಾಗಿದೆ. ಕೇಂದ್ರದ ಕುರ್ಚಿಯಲ್ಲಿ ತಣ್ಣಗೆ ಕುಳಿತವರೆಲ್ಲ ಕರ್ನಾಟಕಕ್ಕೆ ಬಂದಿಳಿಯಲಿದ್ದಾರೆ. ಬೇಕಾಬಿಟ್ಟಿ ಭರವಸೆಗಳ ಸುರಿಮಳೆಗೈಲಿದ್ದಾರೆ.

Thursday, March 6, 2008
ನಿದ್ದೆಗೆಡಿಸಿದ 'ಶಿವರಾತ್ರಿ'
ಹೌದು. ನಿನ್ನೆ ಶಿವರಾತ್ರಿ. ಮನೇಲಿ ದೀಪ ಹಚ್ಚಿ ಪೂಜೆ ಮಾಡುವಷ್ಟು ಸಮಯ ನಂಗಿರಲಿಲ್ಲ. ಬೆಳಿಗ್ಗೆ ಏಳೂವರೆ ಆಫೀಸಿಗೆ ಬಂದವಳು ರಾತ್ರಿ 10 ಗಂಟೆಗೆ ಮನೆಗೆ ತಲುಪಿದ್ದೆ. ನನ್ ತಮ್ಮನಿಗೆ ರಜೆ ಆಗಿದ್ದರಿಂದ ದೇವರ ಪೊಟೋಗಳಿಗೆ ಹೂವು ಹಾಕಿ ಪೂಜೆ ಮಾಡಿ..ಮನೆಯೇ ಘಮ್ ಅಂತ ಪರಿಮಳ ಬರ್ತಾ ಇತ್ತು. ಮನೆ ಪಕ್ಕದ ದೇವಾಲಯವೊಂದರಲ್ಲಿ ಬೆಳಿಗ್ಗೆಯಿಂದ ಸಂಜೆ ತನಕ ಕ್ಯೂ ನಿಂತು ಪ್ರಸಾದವೂ ತೆಗೆದುಕೊಂಡು ಬಂದಿದ್ದ. ಇಷ್ಟೆಲ್ಲಾ ಮಾಡಿ ಪಾಯಸನೂ ಮಾಡಿಟ್ಟಿದ್ದ ಮಹರಾಯ. ನಾನು ಮನೆಗೆ ಹೋಗಿದ್ದೆ ತಡ 'ಅಕ್ಕ ಇವತ್ತು ನೀನು ಪೂಜೆ ಮಾಡಬೇಕು. ಪಕ್ಕದ ಮನೆ ಆಂಟಿ ಭಾರೀ ಗ್ರ್ಯಾಂಡಾಗಿಯೇ ಪೂಜೆ ಮಾಜೆ ಮಾಡಿದ್ದಾರೆ. ನೀನೂ ಮಾಡ್ಬೇಕು' ಅಂದಾಗ ನನಗೆ ಸಿಟ್ಟು ನೆತ್ತಿಗೇರಿತ್ತು. ಮನೆಗೆ ತಲುಪುವಾಗಲೇ ಗಂಟೆ 10, ಇನ್ನು ಪೂಜೆ-ಪುರಸ್ಕಾರಗಳಿಗೆ ಸಮಯವೆಲ್ಲಿಂದ? ಅಂದು ಸ್ನಾನಕ್ಕೆ ಹೋಗಿ ಅವನ ಸಮಾಧಾನಕ್ಕೆ ದೀಪ ಹಚ್ಚಿ ಕೈಮುಗಿದೆ. ಎಲ್ಲಾ ಮುಗೀತು. ಊಟ ಮಾಡಿಯೂ ಆಯಿತು.
ಅಷ್ಟೊತ್ತಿಗೆ ಪಕ್ಕದ್ಮನೆ ಆಂಟಿ ಮಗ ಬಂದು, ನಾನು ಜಾಗರಣೆ ಮಾಡ್ತೀವಿ ಆಂಟಿ..ನೀವೂ ಬನ್ನಿ ಅನ್ಬೇಕೆ?ಅವನ ಮೇಲೆಯೇ ರೇಗಿಬಿಟ್ಟೆ. ಯಾಕಂದ್ರೆ ಸಂಜೆ ಆಫಿಸಿನಿಂದ ಹೊರಟಾಗ ಗಂಟೆ 8 ಆಗಿದ್ದರೂ, ಟ್ರಾಫಿಕ್ ಜಾಮ್ ಮುಗಿಸಿ ಹೋಗಕೆ 2 ಗಂಟೆ ಬೇಕಾಯಿತು. ಟ್ರಾಫಿಕ್ನಲ್ಲಿ ಸಿಕ್ಕಹಾಕೊಂಡ್ರೆ ..ಬಸ್ಸಿಂದಿಳಿದು ಅಟೋ ಹಿಡಿದು ಒಳದಾರಿ ಮೂಲಕ ಮನೆಗೆ ಹೋಗುತ್ತೇನೆ. ಬಸ್ಸಲ್ಲಿ ನಿಂತುಕೊಂಡು ಹೋಗುವಷ್ಟು ಸಹನೆ ನಂಗಿಲ್ಲ. ಮೊನ್ನೆ ಅಟೋನು ಸಿಗದೆ ಪರದಾಡಿದ್ದೆ.
ನಾವು ಊಟ ಮಾಡಿ ಮಲಗಿದೆವು. ನಮ್ ಪಕ್ಕದಮನೆವರೆಲ್ಲ ಜಾಗರಣೆಗೆ ಸಿದ್ದವಾಗುತ್ತಿದ್ದರು. ತಮಾಷೆಯೆಂದರೆ ಅವರ ಜಾಗರಣೆ ಜೊತೆಗೆ ನಮಗೂ ನಿದ್ದೆ ಇಲ್ಲದಂತೆ ಮಾಡಿದ್ದರು. ರಾತ್ರಿ 10 ಗಂಟೆಗೆ ಜಾಗರಣೆಗೆಂದು ಹೊರಗಡೆ ಕೂತು, ಪಟ್ಟಾಂಗ ಆಡೋಕೆ ಶುರು ಮಾಡಿದ ನಾಲ್ವರು ಆಂಟಿಯರು ಮತ್ತು ಐದಾರು ಹುಡುಗ್ರು ಬೆಳಿಗ್ಗೆ ತನಕವೂ ಶಿವ ಧ್ಯಾನ ಬಿಟ್ಟು ಪಕ್ಕದೂರಿನ ಸುದ್ದಿ ಮಾತಾಡುತ್ತಿದ್ದರು. ಹುಡುಗ್ರರು ಜೋರು ಬೊಬ್ಬೆ ಹಾಕಿ ಮಾತಾಡುತ್ತಿದ್ದರೆ, ಈ ಆಂಟಿಯವರು ಗಂಡನ-ಮಕ್ಕಳ, ಕಷ್ಟ, ಹಪ್ಪಳ, ಸಂಡಿಗೆ ಕಾಯಿಸೋದನ್ನು ಮಾತಾಡೋದ್ರು ಬಿಟ್ರೆ ಬೇರೆನೂ ಮಾತಾಡುತ್ತಿಲ್ಲ. ಮಾತಾಡುವುದು ಮಾತ್ರವಲ್ಲ ವಿವಿಧ ರೀತಿಯ ಮಿಮಿಕ್ರಿ, ಹಾಡು, ಡಬ್ಬ ಬಡಿಯೋದು ಎಲ್ಲವನ್ನೂ ಮಾಡುತ್ತಿದ್ದರು. ಅವರಿಗೆ ಬೈಯಾಕಾಗುತ್ತಾ? ಏನ್ ಮಾಡೋದು..ಮನಸಲ್ಲಿ ಬೈಯುತ್ತಾ ತಿರುವ ಫ್ಯಾನಿನ ಸದ್ದು ಆಲಿಸುತ್ತಾ ಕಣ್ಬಿಟ್ಟು ಮಲಗಿದ್ದೆವು ನಾವು. ಅಂತೂ-ಇಂತು ಕೊನೆಗೆ ಬೆಳಗೂ ಆಯಿತು. ಐದು ಗಂಟೆಗೆ ಎದ್ದು ಮತ್ತೊಮ್ಮೆ ನಿದ್ದೆಗಣ್ಣಲ್ಲಿ ಸ್ನಾನ ಮಾಡಿದ್ದೆ. ನಿದ್ರೆ ಹೋಗುತ್ತಾ? ಆಫೀಸಿನಲ್ಲಿಯೂ ನಿದ್ರೆಗಣ್ಣಲ್ಲಿಯೇ ಕೆಲಸ ಮಾಡಬೇಕಾಯಿತು.
ಬೆಂಗಳೂರಿನಲ್ಲಿ ಇದೇ ಮೊದಲ ಬಾರಿ ಶಿವರಾತ್ರಿಯ ಅನುಭವ ಪಡೆದಿದ್ದೇನೆ. ಇದನ್ನೆಲ್ಲಾ ಕಂಡಾಗ ನಮ್ಮನೆಯಲ್ಲಿ ಶಿವರಾತ್ರಿ ಆಚರಿಸುತ್ತಿದ್ದ ಆ ಸನ್ನಿವೇಶಗಳು ಕಣ್ನಮುಂದೆ ಸುಳಿದಾಡುತ್ತವೆ. ನಮ್ಮಜ್ಜ, ಅಜ್ಜಿ, ಚಿಕ್ಕಮ್ಮ, ಅಮ್ಮ, ದೊಡ್ಡಮ್ಮ ಮತ್ತು ಅವರ ಮಕ್ಕಳು ಸೇರಿ ನಾವು ಶಿವ ರಾತ್ರಿ ಆಚರಿಸುತ್ತಿದ್ದೇವು. ಇಡೀ ದಿನ ಉಪವಾಸ, ರಾತ್ರಿಯಿಡಿ ಭಜನೆ ಮಾಡುವುದು. ಅತ್ಯಂತ ಭಕ್ತಿಯಿಂದ ಹಾಡಿ ಶಿವನನ್ನು ಭಜಿಸುತ್ತಿದ್ದೇವು. ಆದರೆ ಬೆಂಗಳೂರಲ್ಲಿ ಭಜನೆ ಬದಲು ಸಿನಿಮಾ, ಹಾಡು ಮುಂತಾದವುಗಳೂ ನಡೆಯುತ್ತವೆ, ಬಹುಶಃ ದೇವಾಲಯಗಳಲ್ಲಿ ಬಿಟ್ರೆ ಮತ್ತೆ ಜಾಗರಣೆ ಮಾಡುವವರ ಮನೇಲಿ ಇದೇ ರೀತಿ ಸಿನಿಮಾರಾತ್ರಿ ಆಗಿರಬಹುದು. ಶಿವರಾತ್ರಿಯಂದು ಜಾಗರಣೆ ಅಂದ್ರೆ ಬರೇ ನಿದ್ದೆಗೆಟ್ಟು ಮಜಾ ಮಾಡೋದು ಅಂದ್ಕೊಂಡಿದ್ದಾರೆ ಜನ. ಕಾಲ ಬದಲಾಗಿದೆ. ಏನು ಮಾಡಕ್ಕೆ ತಾನೇ ಸಾಧ್ಯ?

Subscribe to:
Posts (Atom)